ಯೋಗ ಜೀವನದ ಭಾಗ

ಯೋಗ ಜೀವನದ ಭಾಗ
-vijay udbal
ಯೋಗವು ಕಿ.ಪೂ 5000 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ ಅಂತ ವೇದಗಳಲ್ಲಿ ಉಲ್ಲೇಖಿಸಲಾಗಿದೆ  ಯೋಗವು  ಹಿಂದೂ ಧರ್ಮದ ಒಂದು ಭಾಗವಾಗಿತ್ತು .ಏಕೆಂದರೆ ಲಯಕರ್ತನಾದ ಶಿವನು ಸದಾ ಧ್ಯಾನದಲ್ಲಿ ಲೀನನಾಗಿರುವುದು .ಭಕ್ತಪಾಲಕನಾದ ವಿಷ್ಣು ಏಕಾಂತದಲ್ಲಿ ಯೋಗನಿದ್ರೆ ಯಲ್ಲಿ ಮಗ್ನನಾಗಿರುದನ್ನು ನೋಡುತ್ತೆವೆ ಋಷಿ ಮುನಿಗಳು ಭಗವಂತನಿಂದ ವರವನ್ನು ಪಡೆಯಲು ಕಠೋರ ತಪಸ್ಸು ಮಾಡುತ್ತಿದ್ದರು ಅಲ್ಲಿ ಹಠಯೋಗದ ಪ್ರಯೋಗಯಾಗುತ್ತಿತ್ತು . ಹಿಂದೂ ಧರ್ಮದ ಪುರಾಣವನ್ನು ವಾಚನ ಮಾಡಿದ್ದರೆ  ಒಮ್ಮೆ ಋಷಿ ಬಳಗವು ವಿಷ್ಣುವನ್ನು ಭೇಟಿ ಮಾಡಲು ವೈಕುಂಠಕ್ಕೆ ಅಗಮಿಸಿತ್ತು ರೋಗಗಳಿಂದ ದಾನವರಿಂದ ಲೋಕ ಕಲ್ಯಾಣಕ್ಕಾಗಿ  ಮನುಜರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೆ ಸದೃಢವಾಗಿಸಬೇಕೆಂದು ಕೇಳಿದರು ಆಗ ವಿಷ್ಣು ಭೂಲೋಕದಲ್ಲಿ ಪತಂಜಲಿ ಋಷಿಯ ಜನನವಾಗುವುದು ಇದ್ದರಿಂದ ಭೂಲೋಕದಲ್ಲಿ ಅವರಿಂದ ಯೋಗವು ಹೊಸ ಚಿಕ್ಸಿತೆ ಪದ್ದತಿಯಾಗಿ ಉದಯವಾಗುವುದು ಎಂದು ನುಡಿದನು ಭವಿಷ್ಯವಾಣಿಯಂತೆ ಋಷಿಯ ಜನನ ನಂತರ ಕಾಲಾಂತರದಲ್ಲಿ ಪತಂಜಲಿ  ಋಷಿಯು ಘೋರ ತಪಸ್ಸು ಮಾಡಿ ಯೋಗದ ಙ್ಞಾನವನ್ನು ಪಡೆದು ವಿಂಧ್ಯಾ ಪರ್ವತದಲ್ಲಿ ಸಾವಿರಾರು ಶಿಷ್ಯರೊಂದಿಗೆ ಸಂಧ್ಯಾಪೂರ್ವದಲ್ಲಿ ಪ್ರಯೋಗಿಕ ಯೋಗಾಸನ ಮಾಡತೊಡಗಿದ್ದ .ಇದ್ದರಿಂದ ಯೋಗದಲ್ಲಿ ಪ್ರತ್ಯೇಕ ಅಂಗಗಳ ವೈಫಲ್ಯಕ್ಕಾಗಿ  ಮತ್ತು ಪ್ರತ್ಯೇಕ ರೋಗಗಳಿಗೆ ಪ್ರತ್ಯೇಕವಾದ ಯೋಗಾಸನ ಮಾಡುವರಿಂದ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂದೂಁ ತನ್ನ ಲಿಪಿಗಳಲ್ಲಿ ಉಲ್ಲೇಖಿಸಿದ್ದಾನೆ.ತಾನು ಯೋಗದ ಕುರಿತು 195 ಸೂತ್ರಗಳನ್ನು ರಚಿಸಿದ್ದಾನೆ ಮಹಾಭಾರತದಲ್ಲಿ  ಕೂಡ ಯೋಗ ಕುರಿತು  ಆರ್ಜುನ ಉದ್ದೇಶಿಸಿ ಬೋಧನೆ ಶ್ರೀ ಕೃಷ್ಣಾ ಮಾಡುತ್ತಾನೆ ಯೋಗವನ್ನು ಮೂರು ಭಾಗ ಮಾಡಲಾಗಿದೆ ಕರ್ಮಯೋಗ ,ಜ್ಞಾನಯೋಗ ಭಕ್ತಿಯೋಗ ಬಗ್ಗೆ  ಸವಿಸ್ತಾರವಾಗಿ ಶ್ರೀ ಕೃಷ್ಣ ನು ಬೋಧಿಸಿದ್ದಾನೆ ಯೋಗವು ಮುಕ್ತಿಮಾರ್ಗಕ್ಕೆ ಜ್ಞಾನಮಾರ್ಗಕ್ಕೆ ಶಾಂತಿಮಾರ್ಗಕ್ಕೆ ಬೇಕೆಬೇಕು .ಆಧುನಿಕ ಜೀವನ ಶೈಲಿಯಲ್ಲಿ ಒತ್ತಡಮಯ ವಾತಾವರಣದ ಬದುಕಿನ ಹೆಜ್ಜೆಯಲ್ಲಿ ಯೋಗವು ಬೇಕೆಬೇಕು ಯೋಗಾಸನವು ವಿವಿಧ ಪ್ರಾಣಿಗಳ ಭಂಗಿಗಳನ್ನು ಅನುಕರಿಸಲಾಗಿದೆ .ಉದಾಹಣೆಗೆ ಮೀನುವಿನ ಮತ್ಸ್ಯಾಸನ ಹುಲಿ ನಾಯಿ ಪಕ್ಷಿಗಳ ಇತ್ಯಾದಿಗಳ ಭಂಗಿ ಹೊಂದಿದೆ. ಯೋಗದಲ್ಲಿರುವ ಶವಾಸನ ಸೂರ್ಯ ನಮಸ್ಕಾರ ಪ್ರಾಣಾಮಯ ವಜ್ರಾಸನ ಮಕರಾಸನ ವೃಕ್ಷಾಸನ ಇತ್ಯಾದಿ ಆಸನಗಳು ಹೃದಯ ಕಾಯಿಲೆ ಮಾನಸಿಕ ಸಕ್ಕರೆ ಕಾಯಿಲೆ ರಕ್ತದೊತ್ತಡ ಸಮಸ್ಯೆಗಳಿಗೆ ಹಾಗೂ ಇತರೆ ಕಾಯಿಲೆಗಳಿಗೆ ಯೋಗವು ರಾಮಬಾಣವಾಗಿದೆ ವೈಜ್ಞಾನಿಕವಾಗಿ ನೋಡಿದರೆ . ದೇಹದ  ಜೀವಕೋಶಗಳಿಗೆ ನೀರೂ ಮತ್ತು ಯೋಗಾಸನದಿಂದ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ  ಅಮ್ಲಜನಕ ಒದಗಿಸಬಹುದು ಎಂದು ಸಾಬೀತು ಪಡಿಸಲಾಗಿದೆ. ಜೂನ್21 ರಂದು ವಿಶ್ವ ಯೋಗ ದಿನಾಚರಣೆ  ಮಾಡಲಾಗುವುದು ಇವತ್ತು ಇಡೀ ಜಗತ್ತು ಭಾರತದ ಯೋಗವನ್ನು ತಮ್ಮದಾಗಿಸಿಕೊಳ್ಳಬಲ್ಲದು ಚೀನೀ ಒಬ್ಬ ಹುಡುಗ ಯೋಗದಲ್ಲಿ ನಿರಂತ ನಾಗಿರುತ್ತಾನೆ ಮುಸ್ಲಿಂ ಸಮುದಾಯದ ಒಬ್ಬ ಮಹಿಳೆ ಹಿಂದೂ ಜನರಿಗೆ ಯೋಗವನ್ನು ಕಲಿಸುತ್ತಿದ್ದರೆ ಆಶ್ಚರ್ಯ ಪಡಬೇಕಿಲ್ಲ ಏಕೆಂದರೆ ಇಡೀ ಜಗತ್ತು ಯೋಗವನ್ನು ಅಷ್ಟು ಪ್ರೀತಿಸುತ್ತಾರೆ.ಭಾರತದ ಯೋಗವನ್ನು   ಇಡೀ ಜಗತ್ತು ಗುರ್ತಿಸುವಂತೆ ಮಾಡಿದ ವಿಶ್ವಸಂಸ್ಥೆಗೂ ಪ್ರತಿಜನರಿಗೆ ಯೋಗವನ್ನು ಕಲಿಸಿಕೊಟ್ಟು ಮನ ಮನಕ್ಕೂ ಮುಟ್ಟುವಂತೆ ಮಾಡಿದ ಶ್ರೀ ರವಿಶಂಕರ ಗುರೂಜೀ ಗೂ ಬಾಬಾ ರಾಮದೇವಜೀ ಗೂ ಅನಂತ ನಮನಗಳು ಭಾರತವು ಈಗ ಪ್ರಾಚೀನ ಸಂಸ್ಕೃತಿಯ ಯೋಗವು ಜಗತ್ತಿನ ಮುಂದೆ ತೆರೆದಿಟ್ಟಿದೆ ಇದನ್ನು ನಿಮ್ಮದಾಗಿಸಿಕೊಳ್ಳಿ ಅರೋಗ್ಯವಾಗಿರಿ ಯೋಗವನ್ನು ನೀವು ಕಲಿಯಿರಿ  ಮತ್ತೊಬ್ಬರಿಗೆ ಕಲಿಸಿರಿ
ಜೈ ಹಿಂದ್

No comments:

Post a Comment

Note: only a member of this blog may post a comment.