ನೂರೆಂಟು ಮಾತಿನ ವಿಶ್ವೇಶ್ವರ ಭಟ್ಟರ ಮಾತು

 Page No.1 

-Vijay Udbal


ನೂರೆಂಟು ಮಾತಿನ ವಿಶ್ವೇಶ್ವರ ಭಟ್ಟರ ಮಾತು



ಆವತ್ತು ಭಾನುವಾರ ಆತ್ಮೀಯರ ಕಾರ್ಯಕ್ರಮ ಒಂದಕ್ಕಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು

ಅಕಸ್ಮಾತಾಗಿ ನಮ್ಮೆಲ್ಲರ ನೆಚ್ಚಿನ ವಿಶ್ವೇಶ್ವರ ಭಟ್ ಖ್ಯಾತ ಅಂಕಣಕಾರರು, ಸುವರ್ಣ ನ್ಯೂಸ್ ನ ಸಂಪಾದಕರು , ವಿಶ್ವವಾಣಿಯ ಪ್ರಧಾನ ಸಂಪಾದಕರಾದವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ನನಗೆ ಸಿಕ್ಕಿತು ಅದು ಅನಿರೀಕ್ಷಿತವಾದ ಘಟನೆ ನಡೆಯಿತು ಬಂದ ಕಾರ್ಯಕ್ರಮ ಬೇರೆಯಾಗಿತ್ತು ಭಾಗವಹಿಸಿದ ಕಾರ್ಯಕ್ರಮ ಬೇರೆಯಾಗಿತ್ತು ಭಾಗವಹಿಸಬೇಕಾದ ಕಾರ್ಯಕ್ರಮದ ಸಮಯವು ತುಸು ಹೆಚ್ಚಿತ್ತು ಹೀಗಾಗಿ ಹೆಚ್ಚಿನ ಬಿಡುವು ನನಗೆ ಸಿಕ್ಕಿತ್ತು . ಹೀಗಾಗಿ ಒಟ್ಟಿನಲ್ಲಿ ನಾನೊಬ್ಬ ಅದೃಷ್ಟ ಶಾಲಿ ಭಟ್ಟರ ಅಭಿಮಾನಿ ಬಿಡಿ , ವಿಶ್ವೇಶ್ವರ ಭಟ್ಟರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದಾವಕಾಶ ನನಗೆ ಲಭಿಸಿತು ಜ್ಞಾನದ ದಾಹ ಸ್ವಲ್ಪ ಮಟ್ಟಿಗೆ ತಗ್ಗಿಸುವ ಪ್ರಯತ್ನ .ವಿಶ್ವೇಶ್ವರ ಭಟ್ರು ಸದಾ ಹಸನ್ಮುಖಿ, ಪ್ರವಾಸಿಗ ಅಂಕಣಕಾರ 68 ದೇಶಗಳನ್ನು ಸುತ್ತಿ ಜನರ ವೇಷಭೂಷ ಆಧುನಿಕತೆಗೆ ಸಂಬಂಧಿಸಿದ ಹೊಸ ಕಥೆಗಳಿಗೆ ಮಸಾಲೆಯನ್ನು ಬೆರೆಸಿ ಅದನ್ನ ಓದಿಗರ ಮುಂದೆ ಪ್ರಸ್ತುತಪಡಿಸುವ ಅಕ್ಷರ ಮಾಂತ್ರಿಕರು .ನಾನಿನ್ನೂ Tanage ವಯಸ್ಸಿನಲ್ಲಿ PU ಓದುತ್ತಿದ್ದೆ ಕನ್ನಡಪ್ರಭ , ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರ ಆಗ ಜಗತ್ತಿನ ಸಾಧಕರ ಛಲ, ಪ್ರಯತ್ನ , ಶ್ರಮವನ್ನು ಒಗ್ಗೂಡಿಸಿ ಸಾಧಿಸಿದ ಸಾಧಕರ ಯಶೋಗಾಥೆ ಪ್ರಕಟಿಸುವ " ನೂರೆಂಟು ಮಾತುಗಳು " ಮತ್ತು ಸಹಜಾ ಹೆಸರಿನಿಂದ ಬರೆಯುತ್ತಿದ್ದ ಹಾಸ್ಟೆಲ್ ಹುಡುಗಿ ತಳಮಳವನ್ನು "ಬಾಲ್ಕನಿಯಿಂದ" ಯಾರು ಮರೆಯಲು ಸಾಧ್ಯ . ಆ ಕಾರ್ಯಕ್ರಮದಲ್ಲಿ ಅವರು ಸಾಧಿಸಿದ ಸಾಧನೆ, ಸಾಧಿಸಬೇಕಾದ ಕೆಲಸದ ಬಗ್ಗೆ ತಮ್ಮ ಮಿತ್ರರಿಂದ ಭಾಷಣ ಯುದ್ದಕ್ಕೂ ಪ್ರಸ್ತಾಪವಿತ್ತು ತಾವು ಪತ್ರಿಕಾ ಉದ್ಯಮದಲ್ಲಿದ್ದಾಗ ತಮ್ಮ ಒಂದು ಪುಸ್ತಕವನ್ನು ಪ್ರಕಟಿಸಬೇಕಾದರೆ ಭಗೀರಥ ಪ್ರಯತ್ನ ಮಾಡಬೇಕಾಗುತ್ತಿತ್ತು ಆಗಿನ ಕಾಲದಲ್ಲಿ ಪುಸ್ತಕವನ್ನು ಪ್ರಕಟಿಸಬೇಕಾದರೆ 108 ಪ್ರಕಾಶಕರ ಹತ್ತಿರ ತಿಂಗಳಗಟ್ಟಲೆ ಹೋಗಿ ಪ್ರಕಟಿಸುವಂತೆ ಗೋಗರಿಯ ಬೇಕಾಗುತ್ತಿತ್ತು. ಪ್ರಸ್ತುತ ಯುಗದಲ್ಲಿ ಈ ಕಾಯಕ ಅನ್ನದಾಕ್ಷರ ಆಗಿ ರೂಪಗೊಂಡಿದೆ ಈಗಿನ ಕಾಲದಲ್ಲಿ ಸ್ಟಾರ್ ಲೇಖಕರು 10 ಕೋಟಿ 20 ಕೋಟಿ ಅಡ್ವಾನ್ಸ್ ತೆಗೆದುಕೊಂಡು ಪ್ರಕಾಶಕರಿಗೆ ಪುಸ್ತಕವನ್ನು ಬರೆದುಕೊಡುತ್ತಾರೆ ಅದರಲ್ಲಿ ನಮ್ಮ half love story ನ ಚೇತನ್ ಭಗತ್ ಒಬ್ಬರು. ಅವರಂತೆ "ನಂಬರ್ ಒನ್ ಆಗುವುದು ಹೇಗೆ ?" ಖ್ಯಾತಿಯ ಯಂಡಮುರಿಯವರು ಹೊಸ ಪುಸ್ತಕ ಬರೆಯಬೇಕಾದರೆ ಪ್ರಕಾಶಕರ ಹತ್ತಿರ 10- 20 ಲಕ್ಷ ಅಡ್ವಾನ್ಸ್ ಪಡೆದುಕೊಂಡು ಬರೆಯಲು ಆರಂಭಿಸುತ್ತಾರೆ . ಅವರ ಸಾಲಿನಲ್ಲಿ ಅಕ್ಷರ ಮಾಂತ್ರಿಕ ನಂದೇ ಹಾಯ್ ಬೆಂಗಳೂರಿನ ಪ್ರಖ್ಯಾತಿಯಾದ ರವಿ ಬೆಳಗೆರೆಯನ್ನು ಯಾರು ಮರೆಯಲು ಸಾಧ್ಯವಿಲ್ಲ . ಹೀಗೆ ಬರಹಗಾರರ ಕೈ ಹಿಡಿಯುವಲ್ಲಿ ಅಕ್ಷರಗಳು ಯಾವತ್ತೂ ಮೋಸ ಮಾಡಲ್ಲ ನಾವು ಮಾಡುವ ಕೆಲಸ ಶ್ರದ್ಧೆಂದಿರಬೇಕು ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಹೋಗಬೇಕು. ವಿಪರ್ಯಾಸ ನೋಡಿ ಬಟ್ ರ ಅಂಕಣ ಬಗ್ಗೆ ಹೇಳಬೇಕಾದರೆ ಮೈಸೂರಿನ ವಿದ್ಯಾರ್ಥಿನಿ ಒಬ್ಬಳು ಶ್ರೀಯುತರ ಅಂಕಣಗಳ ಮೇಲೆ ಪ್ರಬಂಧ ಬರೆದು PhD ಪದವಿ ಪಡೆದುಕೊಂಡಿದ್ದಾಳೆ ಆಧುನಿಕ ಕಾಲದಲ್ಲಿ ಪೇಪರ್ ಗಿಂತ ಮೊಬೈಲ್ ಪೇಪರ್ ಹೆಚ್ಚಾಗಿಟ್ಟಿದೆ ಆದರೆ ಪೇಪರ್ ಓದುವ ಮಜಾ ಮೊಬೈಲ್ ನಲ್ಲಿ ಸಿಗೋದು ತುಂಬಾ ಕಷ್ಟ. ವೈಜ್ಞಾನಿಕವಾಗಿ ಹೇಳಬೇಕೆಂದರೆ ಕಣ್ಣುಗಳ ನರ ತಂತುಗಳ ಮೇಲೆ ಮೊಬೈಲ್ ಪ್ರಭಾವ, ಅಡ್ಡ ಪರಿಣಾಮ ಇದ್ದೆ ಇರುತ್ತೆ ಹೀಗಾಗಿ ಅರ್ಧ ಜೀವನಕ್ಕಿಂತ ಹೆಚ್ಚು ಕನ್ನಡಕವೇ ನಮ್ಮ ಗೆಳೆಯನಾಗಿ ಮಾಡಿಕೊಳ್ಳಬೇಕಾಗುತ್ತದೆ ಆದ್ದರಿಂದ ಪುಸ್ತಕಗಳನ್ನು ತಮ್ಮ ಸ್ವಂತ ದುಡ್ಡಿನಿಂದ ಖರೀದಿಸಿ ಓದಿ ಮತ್ತೊಬ್ಬರಿಗೆ ಓದಲು ಪ್ರೇರೇಪಿಸಿ

No comments:

Post a Comment

Note: only a member of this blog may post a comment.