ಮಾಯ ಜಗತ್ತು

Page No. 1

-vijay udbal

ಮಾಯ ಜಗತ್ತು
------------------------
ಸ್ನೇಹಿತರೇ  ಜಗತ್ತೊಂದು ರಂಗ ಮಂದಿರ ಇದರಲ್ಲಿ ನಾವುಗಳೆಲ್ಲ ಪಾತ್ರಧಾರಿಗಳು ಪ್ರತಿಯೊಬ್ಬರು ಒಂದೊಂದು ಪಾತ್ರವನ್ನು ನಿರ್ವಹಿಸಲೇ ಬೇಕು ಸಾಮಾನ್ಯವಾಗಿ ಎಲ್ಲರೂ ಮಗು ಯೌವನ  ಮುಪ್ಪು ಎಂಬ ವೇಷಗಳನ್ನು ತೊಟ್ಟಿಕೊಳ್ಳಲೇ ಬೇಕು
ಕೆಲವೊಮ್ಮೆ ದುಃಖವಿದ್ದರೂ  ನಗಲೂ ಇಷ್ಟ ವಿಲ್ಲದಿದ್ದರೂ   ನಗಲೇ ಬೇಕು ಸಂತೋಷ ವಿದ್ದರೂ ಕೂಡ ಆನಂದದ ಕಣ್ಣೀರು ಸುರಿಸಲೇ ಬೇಕು ಈಗ ಕಾಲ ಬದಲಾವಣೆ ಯಾಗಿದೆ ಪುಣ್ಯದ ತೂಕವು ಪಾಪಕ್ಕಿಂತ ಕಡಿಮೆಯಾಗಿದೆ ಪ್ರಮಾಣಿಕತೆ ಜನರಿಗೆ ಇಲ್ಲಿ ಸ್ಥಾನವಿಲ್ಲ ಭ್ರಷ್ಟತೆ ಮಾಡಿದ ಜನಕ್ಕೆ ಸಿಂಹಾಸನ ಹಾಕಿ ಕೂಡಿಸಲಾಗುವುದು
ಉತ್ತಮ ನಟನೆ ಮಾಡುವ ನಟ ನಟಿ ಯರಿಗೆ ಬೆಲೆ ಇಲ್ಲ ಅದರೆ ನೀಲಿ ಚಿತ್ರಗಳನ್ನು ತೆಗೆದ ನಟ ನಟಿ ಯರಿಗೆ ಭಾರೀ ಬೇಡಿಕೆ ಇದೆ. ಐದು ವರ್ಷಕ್ಕೊಮ್ಮೆ ನಡೆಯುವ ನಮ್ಮ  ಮೂಲಭೂತ ಹಕ್ಕು ದುರುಪಯೋಗ ಮಾಡಿಕೊಳ್ಳಲು ಬರುವ ದೊಡ್ಡ ಎಲೆಕ್ಸನ್ ,ಕ್ರಾಸ್ ಎಲೆಕ್ಸನ್, ಛೋಟಾ ಮೋಟಾ ಎಲೆಕ್ಸನ್,ಗಳಲ್ಲಿ ಲಜ್ಜೆ ನಾಚಿಕೆ ಬಿಟ್ಟೂ ಮತ ಯಾಚನೆ ಮಾಡುವ ನಾಯಕರು ಎಲೆಕ್ಸನ್ ಮುಗಿಯುವರೆಗೆ  ನಮ್ಮ  ಹಿತ ಚಿಂತನೆ ಮಾತಾನಾಡುತ್ತಾರೆ ಎಲೆಕ್ಸನ್ ಮುಗಿದರೆ ಸಾಕು ತಾವು ಗೆದ್ದು ನಮ್ಮ ರೈತರ ಸಾವಿನ ಮೇಲೆ ನಮ್ಮ ನೋವು ಬಡತನ ಮೇಲೆ ರಾಜಕಾರಣದ ವಿಷಯ ಮಾಡಿ ಜಾತಿ ,ಧರ್ಮ .ಬಡವ ಬಲಿದ ಅಂತ ಚರ್ಚೆ ಮಾಡಿ ಮಾಧ್ಯಮಗಳ ಮುಂದೆ ದೊಡ್ಡ   pose ಕೊಡುತ್ತಾರೆ  ಸ್ನೇಹಿತರೇ .ಆದರೆ ಕೆಲಸ ಮಾತ್ರ ಶೂನ್ಯ ಸಂಪಾದನೆ ಮಾಡಿರುತ್ತಾರೆ ನಾವು ಕೊಟ್ಟ ಗೆದ್ದ ಬಂದ ಕ್ಷೇತ್ರದ ಜನರಿಗೆ ಮೂಗು ತೋರಿಸಿ ನಾವು ಅಧಿಕಾರದ ಐದು ವರ್ಷ ತಮ್ಮ ಹೆಸರಿಗೋಸ್ಕರ ಶಾಸಕರಾಗಿದ್ದಾರೆ  ಮತ್ತೊಂದು ಎಲೆಕ್ಸನ್ ಬರುವವರೆಗೆ ಹೋದ ಎಲೆಕ್ಸನ್ ನಲ್ಲಿ ತೋರಿಸಿದ್ದ ಆದಾಯಕ್ಕಿಂತ ಮುಂದಿನ ಚುನಾವಣೆವರೆಗೆ ಹತ್ತು ಪಟ್ಟು ಜಾಸ್ತಿ ಆದಾಯವನ್ನು ಹೊಂದಿರುತ್ತಾರೆ ಆರಾಮಿ ಹರಾಮಿ ಜೀವನ ನಡೆಸುತ್ತಾರೆ  ನಾವುಗಳು ಪ್ರವಾಹನೋ ಬಿಸಿಲೋ ಅಥವಾ ಚಂಡಮಾರುತಗಳಿಗೂ ಸಿಲುಕಿ ಮನೆಗಳೆಲ್ಲ ಕಳೆದುಕೊಂಡು ಒಂದು ಹೊತ್ತು ಊಟಕ್ಕೆ ಹಾತೊರೆಯುತ್ತೆವೆ ಇದ್ದಕೊಳ್ಳಲು  ವಸತಿ ಇಲ್ಲದೇ ಜೀವನ ಕಳೆಯುತ್ತೆವೆ ಸ್ನೇಹಿತರೇ ಎಲ್ಲಿವರೆಗೆ ಟೋಪಿ ಹಾಕಿಸಿಕೊಳ್ಳವವರು ಇರುತ್ತಾರೆಯೋ ಅಲ್ಲಿವರೆಗೆ ಟೋಪಿ ಹಾಕುವವರು ಇರುತ್ತಾರೆ

No comments:

Post a Comment

Note: only a member of this blog may post a comment.