ಕೆಚ್ಚೆದೆಯ ಕನ್ನಡತಿ ಅನು

Page No.1 
-Vijay Udbal




ಕೆಚ್ಚೆದೆಯ ಕನ್ನಡತಿ ಅನು ಇಪ್ಪತ್ತು-ಇಪ್ಪತ್ತೈದು ಆಸುಪಾಸಿನ ವಯಸ್ಸಿನ ಹಸನ್ಮುಖಿ ತರುಣಿ , ಸಂಘಟನಾ , ವಾಕ್ಚಾತುರ್ಯ ಪ್ರವೀಣೆ.
ಅನು ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ ಹಲವಾರು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಕಲಾ ಪದವೀಧರೆ .
ಇವರು ಮೂಲತಃ ರಾಯಚೂರಿನ ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬೇರಗಿ ಗ್ರಾಮದವರು ನರನಾಡಿಗಳಲ್ಲಿ ಕನ್ನಡವೇ ತುಂಬಿಕೊಂಡು ಕನ್ನಡ ಉಳಿಸುವ ಹೋರಾಟಗಾರ್ತಿ. 

ಕನ್ನಡ ಉಳಿಬೇಕು, ಕನ್ನಡ ಬೆಳೆಸಬೇಕು, ಕನ್ನಡ ನಾಡು-ನುಡಿಗಾಗಿ ದುಡಿಯುವ ದೃಢಸಂಕಲ್ಪ ಕೈಗೊಂಡ ಭಗೀರಥ ಪ್ರಯತ್ನಕ್ಕಾಗಿ ತಂಡ ಕಟ್ಟಿಕೊಂಡು ಹನುಮಂತನ ಧ್ವಜವನ್ನು ಹಿಡ್ಕೊಂಡು ಹೊರಟವಳು. ಇಂಗ್ಲೀಷ್ ಪ್ರಭಾವ ಬೀರುವ ಈ ಕಾಲದಲ್ಲಿ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನವೇ ಪ್ರಥಮ ಆದ್ಯತೆ ಏಕೆಂದರೆ ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡಕ್ಕೆ ಉಳಿಗಾಲ ಎಂಬ ನಿಲುವು ನಮ್ಮದು ಮತ್ತು ಆಕೆಯ ಭಾವನೆಯು ಕೂಡ .

 ಕರ್ನಾಟಕದ ತುತ್ತತುದಿ ಬೀದರ ಜಿಲ್ಲೆಯಿಂದ ಹಿಡಿದು ಮೈಸೂರು ಅರಸರು ಆಳಿದ ಶ್ರೀರಂಗಪಟ್ಟಣದವರೆಗೂ ಆಕೆ ಮಾಡಿದಂತಹ ಮಹತ್ತರ ಕನ್ನಡದ ಸಾಧನೆಯು ಯಾವ ರಾಜಕಾರಣಿ , ಯಾವ ಸಂಘ-ಸಂಸ್ಥೆಗಳು ಮಾಡಿರಲಿಕ್ಕಿಲ್ಲ ಒನ್ ಆರ್ಮಿ ಪವರ್ ಇದ್ದಹಾಗೆ. 
ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಎಂಬ ಹೆಸರು ಪ್ರೀತಿಯಿಂದ ಅಭಿಮಾನಿ ಬಳಗ ಕೊಟ್ಟ ಬಳುವಳಿ. ಕವಿ ರನ್ನ ಹೇಳುವ ಹಾಗೆ ಕನ್ನಡ ಇಂತಹ ಭಾಷೆ ಸವಿ ಬಾಳೆಹಣ್ಣು ಸುಲಿದಂತೆ ಸುಲಭ ಇರುವಂತಹ ಭಾಷೆ ನಮ್ಮ ಕನ್ನಡ ಭಾಷೆ ಅಂತಹ ಸಾವಿರಾರು ವರ್ಷದ ಇತಿಹಾಸ ಹೊಂದಿರುವ ಹಳೆಗನ್ನಡ ದಿಂದ ಹೊಸಗನ್ನಡವರೆಗೂ ಹಾಡಿ , ಕುಣಿದ, ಕಲ್ಲಿನಲ್ಲಿ ಕೆತ್ತಿದ , ತಾಳೆಗರಿಯಲ್ಲಿ ಮುತ್ತಿಕ್ಕಿದ ತನ್ನ ಕಂಪು ಸೂಸಿದ ಕನ್ನಡಿಗರ ಜೀವದ ತಂತಿ ಆದ ಕನ್ನಡ. ಕನ್ನಡ ಉಳಿದು ಎಲ್ಲೆಡೆ ಅದರ ಕಂಪು ಪಸರಿಸಬೇಕು ಎಂಬುದು ನಮ್ಮ ಕೆಚ್ಚೆದೆಯ ಕನ್ನಡತಿ ಅನು ಮಾತು . ಹೀಗೆ ಕೆಚ್ಚೆದೆಯ ಕನ್ನಡತಿ ಅನು ಸಿಂಹಿಣಿ ಅಂತೆ ಹಗಲು ರಾತ್ರಿ ಎನ್ನದೇ ದುಡಿಯುವ ಶ್ರಮಜೀವಿ. ಅಭಿವೃದ್ಧಿ ಕಾಣಬೇಕಾದ ಕಟ್ಟಡಕ್ಕಾಗಿ ಬಂದ ಅನುದಾನವು ಕೆಲ ಭ್ರಷ್ಟರು ನುಂಗಿ ನೀರು ಕುಡಿದ ಕಟ್ಟಡ ಅಥವಾ ರಸ್ತೆಯಲ್ಲಿ ಪಕ್ಕದಲ್ಲಿ ಅಥವಾ ಯಾವುದೇ ಸೂರಿಲ್ಲದ ಕಟ್ಟಡದ ಕೆಳಗೆ ರಾತ್ರಿವಿಡೀ ಕಳೆದು. ಹಿಡಿದ ಕಾರ್ಯಕ್ಕಾಗಿ ನೇಸರ ಬರುವ ಮೊದಲೇ ನಮ್ಮ ಕೆಚ್ಚೆದೆಯ  ಕನ್ನಡತಿ ಅನು ರೆಡಿ. ಶಾಲೆಯು ಬಣ್ಣ ಕಾಣದೇ ಮೈಪರಚಿಕೊಂಡಂತೆ ಉದುರಿದ ಸುಣ್ಣ, ಹಾಳುಕೊಂಪೆ ಇರುವ ಅಸ್ಥಿಪಂಜರದಂತೆ ಕಾಣುವ ಕಬ್ಬಿಣ ಸಲಾಕೆಯ ಚಾಚಿಕೊಂಡ ಕಟ್ಟಡ, ಅಕ್ಷರ ಕಾಣದೇ ಮೂಡದೇ ಇರುವ ಕಪ್ಪು ಹಲಗೆ ಕೋಣೆಯಲ್ಲಿ ದಿನವೆಲ್ಲ ಕಳೆದು ಅದಕ್ಕೆ ಕಾಮನಬಿಲ್ಲಿನ ಬಣ್ಣ ಬಳಿದು ಹೊಸ ಒಂದು ರೂಪಕೊಟ್ಟು ಇದು ನಮ್ಮೂರ ಶಾಲೆ ಅನ್ನೋ ರೀತಿಯಿಂದ ಹಳೆವಿದ್ಯಾರ್ಥಿ ಗುರುತಿಸುವ ಮಟ್ಟಿಗೆ ರಿಪೇರಿ ಮಾಡಿ .ಇದು ನಮ್ಮ ಕನ್ನಡ ಶಾಲೆಯಲ್ಲಿ ಇಲ್ಲಿ ಕುವೆಂಪು , ಬೇಂದ್ರೆ ಹಾಗೂ ಜ್ಞಾನಪೀಠ ಪುರಸ್ಕೃತರ ಬರೆದ ಕವನದ ತುಣುಕು, ನುಡಿಮುತ್ತುಗಳು, ಗಾದೆಮಾತುಗಳು ನಕ್ಷೆ , ಭೂಪಟ , ಅಕ್ಷಾಂಶ , ರೇಖಾಂಶ , ವಿಜ್ಞಾನ ಚಿತ್ರಗಳು , ಗಣಿತದ ರೇಖಾಕೃತಿಗಳು , ಹೀಗೆ ಕನ್ನಡ ಗಣಿತ ವಿಜ್ಞಾನ ಸಮಾಜ ಹಲವಾರು ಚಿತ್ರಗಳನ್ನು ಕೊರೆದು ಇದು ನಮ್ಮ ಕನ್ನಡ ಶಾಲೆಯ ಅನ್ನುವ ಹಾಗೆ ಬಿಂಬಿಸುವ ಕರ್ತೃ  ಅನು ಯಾವ ಧನದ ಅಪೇಕ್ಷೆ ಇಲ್ಲದೆ , ನಿಷ್ಕಲ್ಮಷ ಹೃದಯದಿಂದ ಅಲ್ಲಿದ್ದ ಮಕ್ಕಳೊಂದಿಗೆ ಬೆರೆತು ನಲಿಯುತ್ತಾ ಕಲಿಯುತ್ತಾ ಹಾಡು ಹೇಳುತ್ತಾ ಕನ್ನಡಮಯವಾಗಿಸುತ್ತಾಳೆ. ಕನ್ನಡ ಶಾಲೆಗಳು ಮುಖ್ಯವಾಗಿದ್ದರೂ ಕೂಡ ಅದರ ಜೊತೆಗೆ ರಸ್ತೆ ಅಕ್ಕಪಕ್ಕ ಆಸ್ಪತ್ರೆ , ಹಾಳಾದ ಕಟ್ಟಡಗಳು, ದೇವಸ್ಥಾನ ಜೀರ್ಣೋದ್ಧಾರ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದ್ದಾಳೆ ಆಕೆಯು ಕಂಡ ಕನ್ನಡಮಯ ನಾಡಾಗಲಿ ಈ ನಾಡು ಎಂಬುದು ನಮ್ಮೆಲ್ಲರ ಆಶಯ ಹೌದು