ಕನ್ನಡ ಮೇಷ್ಟ್ರು ಮಲ್ಲಿಕಾರ್ಜುನ್ ಮೋಟಗಿ ಸರ್

 

Page No 1 
- vijay udbal
ಮಧ್ಯಮ ವಯಸ್ಸು ಮೂಗಿನ ಮೇಲೆ ಕನ್ನಡಕ , ಕನ್ನಡ ನಿರೂಪಣಾ ವಾಕ್ ಚತುರತೆ , ಸದಾ ಬೇರೆಯವರ ಶ್ರೇಯಸ್ಸನ್ನು ಬಯಸುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಮ್ಮ ಕನ್ನಡ ಮೇಷ್ಟ್ರು ನಮ್ಮ ಭಾಗದ ಸರ್ಕಾರಿ ಪ್ರೌಢಶಾಲೆ ಶ್ರೀ ಕ್ಷೇತ್ರ ರೇವಗ್ಗಿ ಯ ಕನ್ನಡ ಮೇಷ್ಟ್ರು ಮಲ್ಲಿಕಾರ್ಜುನ್ ಮೋಟಗಿ ಸರ್ . ಸಾಹಿತಿಕ, ಆಧ್ಯಾತ್ಮಿಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ದಿನವಿಡಿ ಮೀಸಲಿಡುತ್ತಾರೆ ತಮ್ಮ ಸ್ಕೂಲಿಂದ ಒಬ್ಬ ಹಳೆಯ ವಿದ್ಯಾರ್ಥಿಯಿಂದ ಹಿಡಿದು ಇವಾಗ ಶಾಲೆಗೆ ಹೊಸದಾಗಿ ಸೇರಿಕೊಂಡ ವಿದ್ಯಾರ್ಥಿಯ ಕಡೆಯಿಂದ ಒಂದು ಫೋನ್ ಕರೆ ಬಂತಾದ್ರೆ ಸಾಕು ಆ ಕಡೆಯಿಂದ ಆ ಕರೆಯನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿ ಮೃದು ಭಾಷೆಯಿಂದ ಕರೆ ಮಾಡಿದವರಿಗೆ ಸಮಾಧಾನ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡುತ್ತಿದ್ದರು ಅದೆಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಶುಲ್ಕ ಕಟ್ಟದೆ ಇದ್ದಾಗ ತಮ್ಮ ಕೈಯಿಂದ ಕಟ್ಟಿದ ನಿದರ್ಶನಗಳಿವೆ . ಸದಾ ಇಲಾಖೆಯ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸಿ ಸಮಯಕ್ಕೆ ತಕ್ಕಂತೆ ನಿರ್ವಹಣೆ ಮಾಡುತ್ತಿದ್ದರು. ಇಲಾಖೆಯ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಹಿತೈಷಿಯಾಗಿ ತಮ್ಮ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗಮನ ಹರಿಸಲಿಲ್ಲ ಎಂಬ ಕೊರಗು ಅವರಲ್ಲಿದೆ ಎಷ್ಟು ಸಾರಿ ಶೈಕ್ಷಣಿಕ ವಿಚಾರ ಬಗ್ಗೆ ನನ್ನ ಜೊತೆ ತಾವುಗಳು ಹಂಚಿಕೊಂಡ ವಿಚಾರಗಳಿವೆ. ನಿಮ್ಮ ವರ್ಗಾವಣೆಯ ಸುದ್ದಿಯು ಗರ ಬಡಿದಂತೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಅರಗಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಶತ ಗತ ಮಾಡಿ ವರ್ಗಾವಣೆಯ ವಿರುದ್ಧ  ಮೂರು , ನಾಲ್ಕು ದಿನ ಪ್ರತಿಭಟನೆ ಮಾಡಿದ್ದು , ವಿದ್ಯಾರ್ಥಿಗಳು ಸರ್ ತಮ್ಮ ಬಗ್ಗೆ ಇದ್ದ ಪ್ರೀತಿ ವಾತ್ಸಲ್ಯ ಅಭಿಮಾನ ಮರೆಯುವುದಕ್ಕೆ ನಮ್ಮಿಂದ ಆಗುತ್ತಿಲ್ಲ , ಬಹುಶಃ ನಿಮ್ಮ ಸ್ಥಾನವನ್ನು ಯಾರು ತುಂಬಲಿಕ್ಕೆ ಆಗುತ್ತಿಲ್ಲ ಅದು ಅಸಾಧ್ಯದ ಮಾತು . ಅಪ್ಪಟ ಕನ್ನಡ ಪ್ರೇಮಿ ಸಾಹಿತ್ಯಲೋಕದಲ್ಲಿ ಸಮಯವಿದ್ದಾಗ ತಮ್ಮ ಕೊಡುಗೆ ನೀಡಿದ್ದು ಉದಾಹರಣೆಗಳಿವೆ ಮೇಷ್ಟ್ರು 2- 3 ಕವನಸಂಕಲನವನ್ನು ತಮ್ಮ ಕರ ಕಮಲದಿಂದ ಪದಗಳಿಗೆ ಜೀವತುಂಬಿ ಓದುಗರ ಮುಂದೆ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ ಕಲಬುರ್ಗಿಯ ಅದೆಷ್ಟು ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ ಸರ್ಕಾರಿ ಪ್ರೌಢಶಾಲೆ ರೇವಗ್ಗಿ ಕನ್ನಡ ಮೇಷ್ಟ್ರು ಗೆ ನಾವುಗಳು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ಸರ್ ನಿಮ್ಮ ಮಾರ್ಗದರ್ಶನದಲ್ಲಿ ನೀವು ನೀಡಿದ ಸಲಹೆಗಳು, ವಿಚಾರಗಳು ಸದಾ ನನ್ನ ಅಥವಾ ಇತರ ಸಹದ್ಯೋಗಿಗಳಿಗೆ ಕರ್ತವ್ಯದ ಬಗ್ಗೆ ಪ್ರಾಮಾಣಿಕತೆ ನಿಷ್ಠೆಯೂ ಹಾಗೂ ತಮ್ಮ ಶಾಲಾ ಕರ್ತವ್ಯದ ಬಗ್ಗೆ ಕಾರ್ಯ ಪ್ರವೃತ್ತರಾಗುವ ಎಚ್ಚರಿಕೆಯ ಪಥಯಾಗಿದೆ . ಸಮಯ ಸಿಕ್ಕಿದಾಗ ದೇಶದ ಶೈಕ್ಷಣಿಕ , ಸಾಮಾಜಿಕ, ರಾಜಕೀಯ ವಿಚಾರಗಳನ್ನು ವಿನಿಮಯ ಮಾಡಿಕೊಂಡ ಜ್ಞಾನವು ಮರೆಯುವುದಕ್ಕೆ ಆಗುವುದಿಲ್ಲ . ನಿಮ್ಮಿಂದ ತಿಳಿದುಕೊಂಡ ಪಡೆದುಕೊಂಡ ಅಗಾಧ ಜ್ಞಾನವು ಜೀವನ ಉದ್ದಕ್ಕೂ ಸಹಾಯವಾಗುವುದು ಅದಕ್ಕೆ ನಾನು ಕೃತಜ್ಞ ನಾಗಿದ್ದೇನೆ ಇವತ್ತು ಹೊಸ ವರ್ಷ ನಾನು ವಿಶ್ ಮಾಡಲು ಬಂದಾಗ ನೀವು ಅಷ್ಟೇ ಸೌಜನ್ಯದಿಂದ ಅಕ್ಕರೆಯಿಂದ ಬರಮಾಡಿಕೊಂಡು ಸಿಹಿ ಹಂಚಿದ್ದು ಉಂಟು ಮಾತಿಗಿಳಿದಾಗ ಯಾವಾಗಾದ್ರೂ ಕಾಲ್ ಮಾಡಿದ್ರೆ  ದಯವಿಟ್ಟು ಕರೆಯನ್ನು ಸ್ವೀಕರಿಸಿ ಎಂಬ ದುಃಖದ ಮಾತು ಎಲ್ಲೋ ನನ್ನ ಮನಸ್ಸಿಗೆ ತುಂಬಾನೇ ನೋವುಂಟು ಮಾಡಿತ್ತು ಸರ್ ನಿಮ್ಮ ಒಂದು ಕರೆ ಸಾಕು ನಿಮ್ಮ ಸೇವೆಯಲ್ಲಿ ನಾನು ಸದಾ ಸಿದ್ಧನಾಗಿರುತ್ತಾನೆ ನೀವು ಬರಿ ಆದೇಶ ಮಾಡಿ ಅಷ್ಟೆ ಸಾಕು. ಆಧುನಿಕತೆಯ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಮ್ಮ ಕನ್ನಡ ಮೇಷ್ಟ್ರು SATS , ಎಸೆಸೆಲ್ಸಿ ವಿದ್ಯಾರ್ಥಿಗಳ ನೊಂದಣಿ, ವಿದ್ಯಾರ್ಥಿಗಳ ಶಿಷ್ಯ ವೇತನ ಆನ್ಲೈನ್ ಅರ್ಜಿ, ವಿಚಾರದಲ್ಲಿ ಹಿರಿಯ ಶಿಕ್ಷಕರಾಗಿರಲಿ, ಕಿರಿಯ ಶಿಕ್ಷಕರಾಗಿರಲಿ ಶಿಕ್ಷಕರ ನಡುವೆ ಚರ್ಚೆ ಮಾಡಿಕೊಳ್ಳತ್ತಾ  ಕಂಪ್ಯೂಟರ್ ಜ್ಞಾನವು  ವಿನಿಮಯದೊಂದಿಗೆ ತಾವೇ ಸ್ವತಃ ಕನ್ನಡ ಮೇಷ್ಟ್ರು ಆದರೂ ಕೂಡ ಕಂಪ್ಯೂಟರ್ ಜ್ಞಾನ ಅಗಾಧವಾಗಿ ಬೆಳೆಸಿಕೊಂಡಿದ್ದೀರಿ   ಸರ್ ನಿಮ್ಮ ಆಧುನಿಕತೆ ವೈಚಾರಿಕತೆ  ಕಡೆ ಒಲವು, ಅಲ್ಪ ಸ್ವಲ್ಪ ವಿರಾಮ  ಸಮಯದಲ್ಲಿ ಹಂಚಿಕೊಳ್ಳುವ ವಿಚಾರ ಸ್ನೇಹ ಜ್ಞಾನ ತುಂಬಾನೇ ಮಿಸ್ ಮಾಡಿಕೊಳ್ತಾ ಇದೀವಿ